horizontal rule

Home
ವಿದ್ಯಾರ್ಥಿಗಳಿಗೆ ಸೌಲಭ್ಯಗಳು
ಶಿಕ್ಷಕರಿಗೆ ಸೌಲಭ್ಯಗಳು
ನಮೂನೆಗಳು
ಶಿಕ್ಷಕರ ಸದನ
ಸಂಪರ್ಕಿಸಿ

 

ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃಧ್ದಿ ನಿಧಿ(TBF & SWF)

>> 2009-10ನೇ ಸಾಲಿನ ವಾರ್ಷಿಕ ವರದಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಸ್ಥಾಪನೆ :
 

         ಶಿಕ್ಷಕರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರವು ಧಾರ್ಮಿಕ ಮತ್ತು ದತ್ತಿ ನಿಯಮ 1890 ರ ಅನ್ವಯ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಟಾನವನ್ನು 1962 ರಲ್ಲಿ ಸ್ಥಾಪನೆ ಮಾಡಿದೆ.  ಪ್ರತಿಯೊಂದು ರಾಜ್ಯದಲ್ಲೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಟಾನದ ರಾಜ್ಯ ಘಟಕವು ಕಾರ್ಯ ನಿರ್ವಹಿಸುತ್ತಿದೆ.  ಅದೇ ರೀತಿ ಕರ್ನಾಟಕ ಸರ್ಕಾರವು 1963ರಲ್ಲಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಟಾನದ ಮಾದರಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯನ್ನು ಸರ್ಕಾರಿ ಆದೇಶ ಪತ್ರ ಸಂಖ್ಯೆ ಇಡಿ.171.ಎಸ್.ಹೆಚ್.ಎಸ್. 62 ದಿನಾಂಕ: 18-04-1963ರ ಪ್ರಕಾರ ಮತ್ತು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ನಿಧಿಯನ್ನು ಸರ್ಕಾರಿ ಆದೇಶ ಪತ್ರ ಸಂಖ್ಯೆ: ಇಡಿ.120.ಎಸ್. ಹೆಚ್.ಎಸ್.62 ದಿನಾಂಕ: 15-11-1962ರ ಪ್ರಕಾರ ಸ್ಥಾಪಿಸಿದೆ.

 
ಆಡಳಿತ :
 

         ಮೇಲ್ಕಂಡ ಮೂರು ನಿಧಿಗಳ ಆಡಳಿತಕ್ಕಾಗಿ ಸರ್ಕಾರವು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಸಮಿತಿಯನ್ನು ಸರ್ಕಾರದಿಂದ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡಂತೆ ರಚಿಸಿದೆ.  ಈ ಸಮಿತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಕಾರ್ಯದರ್ಶಿ ಮತ್ತು ಖಜಾಂಚಿಯಾಗಿರುತ್ತಾರೆ.

          ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಶಿಕ್ಷಕರ ಸದನ ಕಟ್ಟಡದಲ್ಲಿ ನಿಧಿಗಳ ಕಛೇರಿ ಕಾರ್ಯ ನಿರ್ವಹಿಸುತ್ತಿದೆ.

 
ಆದಾಯ ಮೂಲ :

       ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಟಾನಕ್ಕೆ ಸೆಪ್ಟೆಂಬರ್ 5 ರಂದು ಆಚರಿಸಲಾಗುವ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಬಾವುಟಗಳನ್ನು ಮಾರುವ ಮೂಲಕ ವಂತಿಗೆಯನ್ನು ಸಂಗ್ರಹಿಸಲಾಗುತ್ತಿದೆ.  (ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ರೂ.2-00 ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರೂ.5.00, ಪದವಿ ಪೂರ್ವ ಕಾಲೇಜು ಮತ್ತು ಮೇಲ್ಮಟ್ಟದ ಹಂತದ ವಿದ್ಯಾರ್ಥಿಗಳಿಂದ ರು.15-00 ರಂತೆ ಸಂಗ್ರಹಿಸಲಾಗುತ್ತಿದೆ.  ಅದೇ ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಂದ ರೂ.20-00, ಪ್ರೌಢಶಾಲಾ ಶಿಕ್ಷಕರಿಂದ ರೂ.25-00 ಮತ್ತು ಪದವಿ ಪೂರ್ವ ಕಾಲೇಜು ಮತ್ತು ಮೇಲ್ಪಟ್ಟ ಹಂತದ ಶಿಕ್ಷಕರಿಂದ ರೂ.30-00 ರಂತೆ ಸಂಗ್ರಹಿಸಲಾಗುತ್ತಿದೆ.  ಹೀಗೆ ಸಂಗ್ರಹಿಸಿದ ವಂತಿಗೆಯಲ್ಲಿ ಶೇಕಡಾ 10 ರಷ್ಟು ನವದೆಹಲಿಯ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಟಾನಕ್ಕೆ ರಾಜ್ಯದಿಂದ ವಂತಿಗೆ ಕಳುಹಿಸಲಾಗುತ್ತಿದೆ.

        ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ನಿಧಿಗಳಿಗೆ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಂದ ತಲಾ ರೂ.10-00 ರಂತೆ ಮತ್ತು ಪ್ರೌಢಶಾಲಾ ಮೇಲ್ಪಟ್ಟ ಹಂತದ ವಿದ್ಯಾರ್ಥಿಗಳಿಂದ ತಲಾ ರೂ.15.00 ರಂತೆ ಶಾಲಾ ಕಾಲೇಜುಗಳಿಗೆ ದಾಖಲಾಗುವ ಸಮಯದಲ್ಲಿ ಪ್ರತಿ ವರ್ಷ ವಂತಿಗೆ ಸಂಗ್ರಹಿಸಲಾಗುತ್ತಿದೆ.

        ಶಿಕ್ಷಕರಿಂದ ಒಂದೇ ಬಾರಿಗೆ ರೂ.1,000-00 ಗಳಂತೆ ಅಜೀವ ಸದಸ್ಯತ್ವ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ.  ಈ ರೀತಿಯಾಗಿ ಸಂಗ್ರಹಿಸಿದ ಹಣವನ್ನು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಉಪಯೋಗಿಸಲಾಗುತ್ತಿದೆ.  

 

horizontal rule

Home | ವಿದ್ಯಾರ್ಥಿಗಳಿಗೆ ಸೌಲಭ್ಯಗಳು  | ಶಿಕ್ಷಕರಿಗೆ ಸೌಲಭ್ಯಗಳು  | ನಮೂನೆಗಳು  | ಶಿಕ್ಷಕರ ಸದನ | ಸಂಪರ್ಕಿಸಿ

Any Queries regarding this web site should be directed to Nodal Officer, e-Gov Unit by email:  [miscpi.edu.karbng@mail.kar.nic.in]

Best Viewable in the browser Ver. 5 or higher at Screen area 1024 by 768 pixels.
Information provided on this Website is copyright of the respective copyright holders.
All registered trademarks are acknowledged.

Last updated: 01-Apr-2010.